
ಬೆಂಗಳೂರಿನಲ್ಲಿ ಆನ್‌ಲೈನ್ ಆರ್ಡರ್ ಜೊತೆ ಉಚಿತವಾಗಿ ಬಂದ ವಿಷಕಾರಿ ದತ್ತೂರ ಹಣ್ಣನ್ನು ಸೇವಿಸಿ ಮಹಿಳೆಯೊಬ್ಬರು ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಎಫ್‌ಎಸ್‌ಎಸ್‌ಎಐ ಕಠಿಣ ಕ್ರಮ ಕೈಗೊಂಡಿದೆ.
ಅಮೆಜಾನ್, ಸ್ವಿಗ್ಗಿ ಇನ್ಸ್ಟಾಮಾರ್ಟ್ ಮತ್ತು ಬಿಗ್‌ಬಾಸ್ಕೆಟ್‌ನಂತಹ ಆನ್‌ಲೈನ್ ವೇದಿಕೆಗಳಲ್ಲಿ ದತ್ತೂರ ಬೀಜ ಮಾರಾಟ ಮಾಡುವುದನ್ನು ನಿಷೇಧಿಸಿ, ಅವುಗಳ ಆಹಾರ ಪರವಾನಗಿಯನ್ನು ಅಮಾನತುಗೊಳಿಸಲಾಗಿದೆ.
ಆಹಾರ ಸುರಕ್ಷತಾ ಇಲಾಖೆಯು ಈ ಸಂಸ್ಥೆಗಳ ವೇರ್‌ಹೌಸ್‌ಗಳ ಮೇಲೆ ದಾಳಿ ನಡೆಸಿದ್ದು, ವಿಷಕಾರಿ ಉತ್ಪನ್ನಗಳ ಲಿಸ್ಟಿಂಗ್ ಅನ್ನು ತಕ್ಷಣ ತೆಗೆದುಹಾಕುವಂತೆ ಆದೇಶಿಸಿದೆ.