ನಮ್ಮ ಮೆಟ್ರೋದ 3ನೇ ಹಂತದ ಕಿತ್ತಳೆ ಮಾರ್ಗ ನಿರ್ಮಾಣಕ್ಕಾಗಿ ಬಿಎಂಆರ್‌ಸಿಎಲ್ ಒಟ್ಟು 1,087 ಕಟ್ಟಡಗಳನ್ನು ಸಂಪೂರ್ಣ ಅಥವಾ ಭಾಗಶಃ ತೆರವು ಮಾಡಲು ನಿರ್ಧರಿಸಿದೆ.
ಈ ಯೋಜನೆಗಾಗಿ 5.4 ಕೋಟಿ ರೂ. ವೆಚ್ಚದಲ್ಲಿ ಕಟ್ಟಡಗಳ ಸ್ಥಿತಿಗತಿ ಅಧ್ಯಯನ ಮತ್ತು ತೆರವಿನ ಮೇಲ್ವಿಚಾರಣೆ ನಡೆಸಲು ಬಿಎಂಆರ್‌ಸಿಎಲ್ ಬಿಡ್‌ಗಳನ್ನು ಆಹ್ವಾನಿಸಿದೆ.
ಜೆಪಿ ನಗರದಿಂದ ಕೆಂಪಾಪುರ ಮತ್ತು ಹೊಸಹಳ್ಳಿಯಿಂದ ಕಡಬಗೆರೆವರೆಗಿನ 37.12 ಕಿ.ಮೀ. ಮಾರ್ಗದಲ್ಲಿ ಸುಮಾರು 1.33 ಲಕ್ಷ ಚ.ಮೀ. ಜಾಗವನ್ನು ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಲಾಗಿದೆ.