
ದರ್ಶನ್ ದ್ವಿಪಾತ್ರದಲ್ಲಿ ನಟಿಸಿರುವ 'ದಿ ಡೆವಿಲ್' ಚಿತ್ರವು ಆಗಸ್ಟ್ 30ರಂದು ಸಂಜೆ 7 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಆಗಿ ಪ್ರಸಾರವಾಗಲಿದೆ.
ಪ್ರಕಾಶ್ ವೀರ್ ನಿರ್ದೇಶನದ ಈ ಚಿತ್ರದಲ್ಲಿ ದರ್ಶನ್ ಅವರು ಧನುಷ್ ರಾಜಶೇಖರ್ ಮತ್ತು ಕೃಷ್ಣ ಎಂಬ ಎರಡು ಭಿನ್ನ ಶೇಡ್‌ಗಳ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಈ ಚಿತ್ರದಲ್ಲಿ ರಚನಾ ರೈ, ಮಹೇಶ್ ಮಂಜ್ರೇಕರ್, ಅಚ್ಯುತ್ ಕುಮಾರ್ ಮತ್ತು ಶರ್ಮಿಳಾ ಮಾಂಡ್ರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ರಾಜಕೀಯ ಹಿನ್ನೆಲೆಯ ಕಥಾಹಂದರವನ್ನು ಹೊಂದಿದೆ.