
ಭಾರತ ವಿರುದ್ಧದ ಮುಂಬರುವ 5 ಪಂದ್ಯಗಳ ಏಕದಿನ ಸರಣಿಯಿಂದ ನ್ಯೂಝಿಲೆಂಡ್ ತಂಡದ ಪ್ರಮುಖ ಆಟಗಾರರಾದ ಮಾರ್ಕ್ ಚಾಪ್ಮನ್ ಮತ್ತು ರಚಿನ್ ರವೀಂದ್ರ ಗಾಯದ ಕಾರಣದಿಂದ ಹೊರಬಿದ್ದಿದ್ದಾರೆ.
ಮಾರ್ಕ್ ಚಾಪ್ಮನ್ ಹ್ಯಾಮ್ಸ್ಟ್ರಿಂಗ್ ಗಾಯಕ್ಕೆ ಒಳಗಾಗಿದ್ದರೆ, ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರಚಿನ್ ರವೀಂದ್ರ ಹೆಗಲಿನ ಗಾಯದಿಂದ ಇನ್ನೂ ಸಂಪೂರ್ಣ ಚೇತರಿಸಿಕೊಳ್ಳದ ಕಾರಣ ವಿಶ್ರಾಂತಿ ಪಡೆದಿದ್ದಾರೆ.
ಪ್ರಮುಖ ಆಟಗಾರರ ಅನುಪಸ್ಥಿತಿಯ ಹಿನ್ನೆಲೆಯಲ್ಲಿ ನ್ಯೂಝಿಲೆಂಡ್ ಆಯ್ಕೆ ಸಮಿತಿಯು ಹೆನ್ರಿ ನಿಕೋಲ್ಸ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿದೆ.