
ಚಿಕ್ಕಮಗಳೂರಿನ ವಾಜಪೇಯಿ ಲೇಔಟ್‌ನಲ್ಲಿ ಬೆಲ್ಲದ ಪಾಕವನ್ನು ಜೇನುಗೂಡಿನೊಂದಿಗೆ ಬೆರೆಸಿ ಅಸಲಿ ಜೇನು ಎಂದು ಮಾರಾಟ ಮಾಡುತ್ತಿದ್ದ ಅಸ್ಸಾಂ ಮೂಲದ ತಂಡವನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಆರೋಪಿಗಳು ನಿರ್ಜನ ಪ್ರದೇಶದಲ್ಲಿ ಈ ನಕಲಿ ಜೇನುತುಪ್ಪ ತಯಾರಿಸಿ ಮಾರಾಟ ಮಾಡುತ್ತಿದ್ದರು.
ಇತ್ತೀಚೆಗಷ್ಟೇ ಕಾಫಿನಾಡಿನಲ್ಲಿ ನಕಲಿ ತುಪ್ಪದ ದಂಧೆ ಬೆಳಕಿಗೆ ಬಂದಿದ್ದ ಬೆನ್ನಲ್ಲೇ ಇದೀಗ ಜೇನುತುಪ್ಪದ ದಂಧೆಯೂ ಪತ್ತೆಯಾಗಿದೆ.