
ಪೂರಿ ಜಗನ್ನಾಥ್ ನಿರ್ದೇಶನದ 'ಸ್ಲಮ್ಡಾಗ್: 33 ಟೆಂಪಲ್ ರೋಡ್' ಸಿನಿಮಾದಲ್ಲಿ ನಟಿ ಟಬು ಗೌರಿ ಹೆಗ್ಡೆ ಎಂಬ ಆದಾಯ ತೆರಿಗೆ ಇಲಾಖೆಯ ಡೆಪ್ಯುಟಿ ಕಮಿಷನರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ವಿಜಯ್ ಸೇತುಪತಿ ಮತ್ತು ದುನಿಯಾ ವಿಜಯ್ ಅಭಿನಯದ ಈ ಬಹುಭಾಷಾ ಚಿತ್ರದಲ್ಲಿ ಟಬು ರಗಡ್ ಮತ್ತು ಪವರ್ಫುಲ್ ಲುಕ್ನಲ್ಲಿ ನಟಿಸಿದ್ದು, ಚಿತ್ರತಂಡ ಪಾತ್ರದ ಝಲಕ್ ಹಂಚಿಕೊಂಡಿದೆ.
ಈ ಚಿತ್ರವನ್ನು ಪೂರಿ ಜಗನ್ನಾಥ್, ಚಾರ್ಮಿ ಕೌರ್ ಮತ್ತು ಜೆಬಿ ನಾರಾಯಣ ರಾವ್ ಕೊಂಡ್ರೊಲ್ಲ ನಿರ್ಮಿಸುತ್ತಿದ್ದು, ಶೀಘ್ರದಲ್ಲೇ ಬಿಡುಗಡೆ ದಿನಾಂಕವನ್ನು ಪ್ರಕಟಿಸಲಾಗುವುದು.