
ರಾಯಚೂರು ನಗರದ ಹಿಂದೂ ರುದ್ರಭೂಮಿಯಲ್ಲಿ ಸ್ಮಶಾನದಲ್ಲಿ ಹೂಳಲಾಗಿದ್ದ ಮೃತದೇಹಗಳನ್ನು ಅಕ್ರಮವಾಗಿ ಹೊರತೆಗೆದು ಖಾಸಗಿ ಮೆಡಿಕಲ್ ಕಾಲೇಜಿಗೆ ಮಾರಾಟ ಮಾಡುತ್ತಿದ್ದ ಬೆಚ್ಚಿಬೀಳಿಸುವ ದಂಧೆ ಬೆಳಕಿಗೆ ಬಂದಿದೆ.
ಸ್ಮಶಾನದ ಸಿಬ್ಬಂದಿ ಕೇವಲ 200 ರಿಂದ 500 ರೂ.ಗಳ ಅಲ್ಪ ಹಣಕ್ಕೆ ಮೃತದೇಹಗಳನ್ನು ಮಾರಾಟ ಮಾಡುತ್ತಿದ್ದು, ಅಂಗಾಂಗಗಳನ್ನು ಬೇರ್ಪಡಿಸುತ್ತಿದ್ದ ದೃಶ್ಯವನ್ನು ಸ್ಥಳೀಯರು ರೆಡ್ಹ್ಯಾಂಡ್ ಆಗಿ ಸೆರೆಹಿಡಿದಿದ್ದಾರೆ.
ಸ್ಥಳೀಯರು ಖಾಸಗಿ ಮೆಡಿಕಲ್ ಕಾಲೇಜಿನ ಇಬ್ಬರು ಸಿಬ್ಬಂದಿ ಹಾಗೂ ಸ್ಮಶಾನದ ಸಿಬ್ಬಂದಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ನೇತಾಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.