
ಬೆಂಗಳೂರಿನ ನಾಗರಬಾವಿ ವ್ಯಾಪ್ತಿಯಲ್ಲಿ ಕಾಲೇಜು ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿಯಲ್ಲಿ ಬಿಕಾಂ ವಿದ್ಯಾರ್ಥಿ ಯೋಗೇಶ್ (19) ಹತ್ಯೆಯಾಗಿದ್ದಾರೆ.
ಮಧ್ಯಾಹ್ನ 2:30ರ ಸುಮಾರಿಗೆ ಕಾಲೇಜಿನ ಹಿಂಭಾಗದ ಜಿಮ್ ಬಳಿ ನಡೆದ ಗಲಾಟೆಯ ವೇಳೆ ನಾಲ್ಕೈದು ಜನರ ಗುಂಪಿನಲ್ಲೊಬ್ಬ ಯೋಗೇಶ್‌ನ ಎದೆಗೆ ಚಾಕುವಿನಿಂದ ಇರಿದ್ದಾನೆ.
ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲAಹಾಗೂ ಆರೋಪಿಗಳು ಕಾಲೇಜಿನ ವಿದ್ಯಾರ್ಥಿಗಳಲ್ಲ ಎಂದು ಪೊಲೀಸರು ತಿಳಿಸಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ವಿಶೇಷ ತಂಡ ರಚಿಸಲಾಗಿದೆ.