
ದುಬೈನಲ್ಲಿ ನಡೆದ ಮಹಿಳಾ ಏಷ್ಯಾಕಪ್ ಫೈನಲ್ನಲ್ಲಿ ಭಾರತ ತಂಡವು ಶ್ರೀಲಂಕಾ ವಿರುದ್ಧ 72 ರನ್ಗಳಿಂದ ಗೆದ್ದು ಎಂಟನೇ ಬಾರಿಗೆ ಚಾಂಪಿಯನ್ ಆಯಿತು.
ಬಿಸಿಸಿಐ ನಿರ್ದೇಶನದಂತೆ, ಎಸಿಸಿ ಅಧ್ಯಕ್ಷ ಹಾಗೂ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಭಾರತೀಯ ಆಟಗಾರ್ತಿಯರು ನಿರಾಕರಿಸಿದರು.
ಕಳೆದ ವರ್ಷ ಪುರುಷರ ತಂಡ ಅನುಸರಿಸಿದ ನಿಲುವನ್ನೇ ಮುಂದುವರಿಸಿದ ಆಟಗಾರ್ತಿಯರು, ಟ್ರೋಫಿ ಇಲ್ಲದೆಯೇ ಮೈದಾನದಲ್ಲಿ ಸಂಭ್ರಮಾಚರಣೆ ನಡೆಸಿದರು.