
ಕರ್ನಾಟಕ ಸರ್ಕಾರಿ ಪಿಂಚಣಿದಾರರು ಮತ್ತು ಅವರ ಅವಲಂಬಿತರಿಗಾಗಿ 'ಸಂಧ್ಯಾ ಕಿರಣ' ವಂತಿಕೆ ಆಧಾರಿತ ನಗದುರಹಿತ ಆರೋಗ್ಯ ಯೋಜನೆಗೆ ಸಚಿವ ಸಂಪುಟ ಆಗಸ್ಟ್ 13ರಂದು ಅನುಮೋದನೆ ನೀಡಿದೆ.
ಈ ಯೋಜನೆಯಡಿ 70 ವರ್ಷದೊಳಗಿನ ಸುಮಾರು 3.11 ಲಕ್ಷ ಪಿಂಚಣಿದಾರರು ಸೇರಿದಂತೆ ಒಟ್ಟು 4.93 ಲಕ್ಷ ಫಲಾನುಭವಿಗಳಿಗೆ ವರ್ಷಕ್ಕೆ ಗರಿಷ್ಠ ₹25 ಲಕ್ಷದವರೆಗೆ ಚಿಕಿತ್ಸಾ ಸೌಲಭ್ಯ ಸಿಗಲಿದೆ.
ಚಿಕಿತ್ಸಾ ವೆಚ್ಚದ 70% ಫಲಾನುಭವಿಗಳ ವಂತಿಕೆಯಿಂದ ಮತ್ತು 30% ರಾಜ್ಯ ಸರ್ಕಾರದ ಪಾಲಿನಿಂದ ಭರಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.