
ಡಿಸೆಂಬರ್ 4ರಿಂದ 13ರ ವರೆಗೆ 'ಬೆಂಗಳೂರು ಜಾತ್ರೆ' ನಡೆಯಲಿದೆ ಎಂದು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಘೋಷಣೆ ಮಾಡಿರುವುದಕ್ಕೆ ಜೆಡಿಎಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ.
ರಾಜ್ಯದಲ್ಲಿ ಬರಗಾಲವಿದ್ದು ರೈತರು ಕಣ್ಣೀರು ಹಾಕುತ್ತಿರುವಾಗ, ರೋಮ್ ನಗರವು ಹೊತ್ತಿ ಉರಿಯುವಾಗ ನೀರೋ ಪಿಟೀಲು ಬಾರಿಸಿದಂತೆ ಈ ಸರ್ಕಾರ ಕೋಟಿಗಟ್ಟಲೆ ಹಣ ಸುರಿದು ಜಾತ್ರೆ ಮಾಡಲು ಹೊರಟಿದೆ ಎಂದು ಜೆಡಿಎಸ್ ಆರೋಪಿಸಿದೆ.
ಅಗತ್ಯ ಮೂಲಸೌಕರ್ಯ ಕಲ್ಪಿಸುವಲ್ಲಿ ವಿಫಲವಾಗಿರುವ ಸರ್ಕಾರ ಬಿಡಿಎ, ಬೆಸ್ಕಾಂ ಹಾಗೂ ಮೆಟ್ರೋದಂತಹ ಸಂಸ್ಥೆಗಳ ಹಣ ಕಿತ್ತುಕೊಂಡು ಜಾತ್ರೆಗೆ ಸುರಿಯುತ್ತಿದ್ದು, ಈ ಹಣವನ್ನು ಸಂಕಷ್ಟದಲ್ಲಿರುವ ರೈತರಿಗೆ ನೀಡಬೇಕು ಎಂದು ಆಗ್ರಹಿಸಿದೆ.