
ಆಸ್ಟ್ರೇಲಿಯಾ ಮೂಲದ ಗ್ರಾಫಿಕ್ ಡಿಸೈನ್ ಪ್ಲಾಟ್‌ಫಾರ್ಮ್ ಕ್ಯಾನ್ವಾ ತನ್ನ ಶೇ. 22ರಷ್ಟು ಅಂದರೆ ಅಂದಾಜು 1,271 ನೌಕರರನ್ನು ಕೆಲಸದಿಂದ ವಜಾಗೊಳಿಸಿದೆ.
ಪುಣೆ ಮೂಲದ ಹಾಗೂ ಹೆರಿಗೆ ರಜೆಯಲ್ಲಿದ್ದ ಶ್ರದ್ಧಾ ಖುಲೆ ಕೂಡ ವಜಾಗೊಂಡಿದ್ದು, ಕಂಪನಿಯು ಅವರಿಗೆ 6 ತಿಂಗಳ ಮುಂಗಡ ವೇತನ ಮತ್ತು ಮ್ಯಾಕ್‌ಬುಕ್ ಉಳಿಸಿಕೊಳ್ಳಲು ಅವಕಾಶ ನೀಡಿದೆ.
2026ರ ಆದಾಯದ ಬೆಳವಣಿಗೆಯ ಅಂದಾಜು ಕುಸಿದ ಹಿನ್ನೆಲೆಯಲ್ಲಿ ಈ ಕಠಿಣ ನಿರ್ಧಾರ ಕೈಗೊಂಡಿರುವುದಾಗಿ ಕಂಪನಿಯ ಸಿಇಒ ಮೆಲಾನಿ ಪರ್ಕಿನ್ಸ್ ತಿಳಿಸಿದ್ದಾರೆ.