
ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಜೆನ್-ಜಿ ವಿದ್ಯಾರ್ಥಿಗಳ ಪ್ರತಿಭಟನೆಯ ಹಿಂದೆ ಪಾಕಿಸ್ತಾನದ ನಂಟು ಮತ್ತು ವಿದೇಶಿ ಹಣಕಾಸು ವಹಿವಾಟು ಇರುವುದು ಪತ್ತೆಯಾಗಿದ್ದು, ದೆಹಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಸುಮಾರು 400ಕ್ಕೂ ಹೆಚ್ಚು ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು 180 ಇನ್ಫ್ಲುಯೆನ್ಸರ್ ಗಳ ಚಟುವಟಿಕೆಗಳ ಮೇಲೆ ನಿಗಾ ಇಡಲಾಗಿದ್ದು, ಮೂರು ಡಿಜಿಟಲ್ ಮಾರ್ಕೆಟಿಂಗ್ ಕಂಪನಿಗಳ ಹಣಕಾಸು ಮೂಲಗಳನ್ನು ಪರಿಶೀಲಿಸಲಾಗುತ್ತಿದೆ.
ಪ್ರತಿಭಟನೆಯನ್ನು ದೇಶವ್ಯಾಪಿ ಬಿಂಬಿಸಲು ಕೃತಕ ಬುದ್ಧಿಮತ್ತೆ (AI) ಬಳಸಿ ಸುಳ್ಳು ಸುದ್ದಿಗಳ ಪ್ರಚಾರ ಮಾಡಲಾಗಿದ್ದು, ಹವಾಲಾ ಮತ್ತು ಕ್ರಿಪ್ಟೋಕರೆನ್ಸಿ ಮೂಲಕ ಹಣ ವರ್ಗಾವಣೆಯಾಗಿರುವ ಶಂಕೆ ವ್ಯಕ್ತವಾಗಿದೆ.