
ಬ್ರಿಟನ್‌ನ ಜೋಡಿಯೊಂದು ಭಾರತ ಪ್ರವಾಸದ ಸಂದರ್ಭದಲ್ಲಿ ಕೆಂಪು ಬಣ್ಣದ ಆಟೋ ರಿಕ್ಷಾವೊಂದನ್ನು ಖರೀದಿಸಿ 'ಟಿಮಿ' ಎಂದು ಹೆಸರಿಟ್ಟು ಅದರಲ್ಲೇ ದೇಶಾದ್ಯಂತ 4,218 ಕಿ.ಮೀ. ಸಂಚರಿಸಿದೆ.
ಭಾರತದಿಂದ ಮರಳುವಾಗ ಆಟೋವನ್ನು ಅಗಲಲು ಮನಸ್ಸಿಲ್ಲದೆ, ಅದನ್ನು ಹಡಗಿನ ಮೂಲಕ ಮರದ ಬಾಕ್ಸ್‌ನಲ್ಲಿ ಪ್ಯಾಕ್ ಮಾಡಿ ಲಂಡನ್‌ಗೆ ತರಿಸಿಕೊಂಡಿದ್ದಾರೆ.
ಸುಮಾರು ಆರು ತಿಂಗಳ ಬಳಿಕ ಲಂಡನ್‌ನ ಗೇಟ್‌ವೇ ಬಂದರಿಗೆ ತಲುಪಿದ ತಮ್ಮ ಪ್ರೀತಿಯ ಆಟೋವನ್ನು ನೋಡಿ ಆ ಬ್ರಿಟಿಷ್ ಜೋಡಿ ಅಪಾರ ಸಂತಸ ವ್ಯಕ್ತಪಡಿಸಿದೆ.