
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಸೋಲಿನ ಬಳಿಕ ಪಾಕಿಸ್ತಾನ ತಂಡದ ಕೋಚ್‌ಗಳನ್ನು ಬದಲಾಯಿಸಿರುವುದಕ್ಕೆ ಮಾಜಿ ಕೋಚ್ ಜೇಸನ್ ಗಿಲ್ಲೆಸ್ಪಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಖ್ಯ ಆಯ್ಕೆಗಾರ ಆಕಿಬ್ ಜಾವೇದ್ ಪ್ರತಿದಿನ ತಮ್ಮ ನಿರ್ಧಾರಗಳನ್ನು ಬದಲಾಯಿಸುತ್ತಿದ್ದಾರೆ ಎಂದು ಆರೋಪಿಸಿದ ಗಿಲ್ಲೆಸ್ಪಿ, ತಂಡದಲ್ಲಿ ಆಟಗಾರರು ಭಯದಿಂದ ಆಡುತ್ತಿದ್ದಾರೆ ಎಂದಿದ್ದಾರೆ.
ಆಯ್ಕೆ ಸಮಿತಿಯ ಅಧ್ಯಕ್ಷರಾಗಿರುವ ಜಾವೇದ್, ತಂಡದ ವೈಫಲ್ಯಕ್ಕೆ ತಮ್ಮನ್ನು ದೂಷಿಸುತ್ತಿರುವುದು ಸರಿಯಲ್ಲ ಎಂದು ಗಿಲ್ಲೆಸ್ಪಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.