
ಮಹಾರಾಷ್ಟ್ರದ ಬಿಎಸ್ಸಿ ಪದವೀಧರ ರೈತ ಅರ್ಜುನ್ ಸಾಬಳೆ ಕೇವಲ ಒಂದು ಎಕರೆ ಪಾಲಿಹೌಸ್ ಜಮೀನಿನಲ್ಲಿ ಗುಲಾಬಿ ಮತ್ತು ಜರ್ಬೆರಾ ಕೃಷಿ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ಪಾಲಿಹೌಸ್ ತಂತ್ರಜ್ಞಾನ ಬಳಸಿ ದಿನಕ್ಕೆ ಸರಾಸರಿ 12,000 ದಿಂದ 13,000 ರೂಪಾಯಿ ಆದಾಯ ಗಳಿಸುತ್ತಿರುವ ಅವರು, ಮಾಸಿಕ ಎಲ್ಲಾ ಖರ್ಚುಗಳು ಹೋಗಿ 2.5 ಲಕ್ಷ ರೂಪಾಯಿ ನಿವ್ವಳ ಲಾಭ ಪಡೆಯುತ್ತಿದ್ದಾರೆ.
ಅವರು ಬೆಳೆಯುವ ಗುಣಮಟ್ಟದ ಹೂವುಗಳು ಸ್ಥಳೀಯ ಮಾರುಕಟ್ಟೆ ಸೇರಿದಂತೆ ಬೆಂಗಳೂರು, ಮುಂಬೈ ಮತ್ತು ಹೈದರಾಬಾದ್ನಂತಹ ದೊಡ್ಡ ನಗರಗಳಿಗೆ ರಫ್ತಾಗುತ್ತಿವೆ.