
ತನ್ನ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಸರ್ಕಾರ ₹14,131.60 ಕೋಟಿ ವಸೂಲಿ ಮಾಡಿದೆ, ಹೀಗಿದ್ದರೂ ತನ್ನನ್ನು ಆರ್ಥಿಕ ಅಪರಾಧಿ ಎಂದು ಕರೆಯುತ್ತಿರುವುದಕ್ಕೆ ವಿಜಯ್ ಮಲ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬಾಂಬೆ ಹೈಕೋರ್ಟ್ ವಿಚಾರಣೆಯಲ್ಲಿ, ಮಲ್ಯ ಉದ್ದೇಶಪೂರ್ವಕವಾಗಿ ನ್ಯಾಯಾಲಯದ ವ್ಯಾಪ್ತಿಯಿಂದ ದೂರ ಉಳಿದಿದ್ದಾರೆ ಎಂದು ಪೀಠವು ಎಚ್ಚರಿಕೆ ನೀಡಿದ್ದು, ಭಾರತಕ್ಕೆ ಬಂದು ಪ್ರಕ್ರಿಯೆ ಎದುರಿಸುವಂತೆ ಸೂಚಿಸಿದೆ.
2018ರ ಕಾಯ್ದೆಯನ್ವಯ ಮಲ್ಯ ಸೇರಿದಂತೆ 15 ಮಂದಿಯನ್ನು ಆರ್ಥಿಕ ಅಪರಾಧಿಗಳೆಂದು ಘೋಷಿಸಲಾಗಿದ್ದು, ವಿದೇಶಾಂಗ ಸಚಿವಾಲಯವು ಯುಕೆಯೊಂದಿಗೆ ಗಡಿಪಾರು ಪ್ರಕ್ರಿಯೆಗಾಗಿ ನಿರಂತರ ಸಂಪರ್ಕದಲ್ಲಿದೆ.