
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ನಟ ಶಿವರಾಜ್ ಕುಮಾರ್ ಅವರಿಗೆ ವಿಚಾರಣಾ ನೋಟಿಸ್ ನೀಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದ್ದು, ಅದನ್ನು ಬೆಂಗಳೂರು ನಗರ ಜಿಲ್ಲಾಡಳಿತ ಸ್ಪಷ್ಟವಾಗಿ ತಳ್ಳಿಹಾಕಿದೆ.
ಗಣತಿ ನಮೂನೆಯಲ್ಲಿ 2002ರ ಹಿಂದಿನ ಮಾಹಿತಿ ನೀಡದ ಕಾರಣ ತಂತ್ರಾಂಶದಲ್ಲಿ 'No Mapping' ಎಂದು ಸ್ವಯಂಚಾಲಿತವಾಗಿ ನೋಟಿಸ್ ಸೃಷ್ಟಿಯಾಗಿದೆಯೇ ಹೊರತು ನಟರಿಗೆ ಯಾವುದೇ ನೋಟಿಸ್ ಜಾರಿಗೊಳಿಸಿಲ್ಲ.
ಶಿವರಾಜ್ ಕುಮಾರ್ ಅವರನ್ನು ಈಗಾಗಲೇ VIP ಮತದಾರ ಎಂದು ಗುರುತಿಸಲಾಗಿದ್ದು, ಅಧಿಕಾರಿಗಳು ಅವರ ನಿವಾಸಕ್ಕೆ ತೆರಳಿ ದಾಖಲೆಗಳನ್ನು ಪರಿಶೀಲಿಸಿ ಶಿವಪುಟ್ಟಸ್ವಾಮಿ ಬಿನ್ ಮುತ್ತುರಾಜ್ ಎಂದು ಹೆಸರು ಬದಲಾಯಿಸಲು ಕ್ರಮ ಕೈಗೊಳ್ಳಲಿದ್ದಾರೆ.