
ಕೆಎಂಎಫ್ ಹಾಲಿನ ದರವನ್ನು ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ ನವೆಂಬರ್ 2ರಿಂದ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹೋಟೆಲ್‌ಗಳಲ್ಲಿ ಕಾಫಿ ಮತ್ತು ಟೀ ಬೆಲೆಯಲ್ಲಿ 5 ರೂಪಾಯಿ ಹೆಚ್ಚಳವಾಗಿದೆ.
ಸಾಮಾನ್ಯವಾಗಿ 15 ರೂಪಾಯಿ ಇದ್ದ ಮಿನಿ ಕಾಫಿ ಅಥವಾ ಟೀ ಬೆಲೆ ಈಗ 20 ರೂಪಾಯಿಗೆ ತಲುಪಿದೆ.
20 ರೂಪಾಯಿ ಇದ್ದ ಒಂದು ಕಪ್ ಪೂರ್ಣ ಕಾಫಿ ಅಥವಾ ಟೀ ಬೆಲೆ ಈಗ 25 ರೂಪಾಯಿಗೆ ಏರಿಕೆಯಾಗಿದೆ ಎಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ.