
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ದೆಹಲಿಯಿಂದ ವರ್ಚುವಲ್ ಮಾಧ್ಯಮ ಸಂವಾದ ನಡೆಸಿ, ಭಾರತವನ್ನು ಬಾಂಗ್ಲಾದೇಶದ ಅತ್ಯಂತ ನಂಬಿಕಸ್ಥ ಮಿತ್ರ ರಾಷ್ಟ್ರ ಎಂದು ಬಣ್ಣಿಸಿದ್ದಾರೆ.
1971ರ ವಿಮೋಚನಾ ಯುದ್ಧ, 1975ರ ಕಠಿಣ ಸಮಯ ಮತ್ತು ಪ್ರಸ್ತುತ ಎದುರಾಗಿರುವ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಭಾರತವು ಬಾಂಗ್ಲಾದೇಶಕ್ಕೆ ನಿರಂತರ ಬೆಂಬಲ ನೀಡಿದೆ ಎಂದು ಹಸೀನಾ ಸ್ಮರಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಶ್ಲಾಘಿಸಿದ ಹಸೀನಾ, ಭಾರತ ಸರ್ಕಾರವು ತಮ್ಮನ್ನು ರಾಷ್ಟ್ರದ ಮುಖ್ಯಸ್ಥೆಯಂತೆ ಅತ್ಯಂತ ಗೌರವ ಮತ್ತು ಆತ್ಮೀಯತೆಯಿಂದ ನಡೆಸಿಕೊಂಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.