
ಡೇಟಾ ಅನಾಲಿಟಿಕ್ಸ್ ಕ್ಷೇತ್ರದಲ್ಲಿ 3 ವರ್ಷಗಳ ಅನುಭವ ಹಾಗೂ ಐಐಎಂ ಕೋಝಿಕ್ಕೋಡ್ನಲ್ಲಿ ಎಂಬಿಎ ಪದವಿ ಪಡೆದಿರುವ ಯುವಕರೊಬ್ಬರು ಉದ್ಯೋಗಕ್ಕಾಗಿ ಒಟ್ಟು 250ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದ್ದಾರೆ.
ಲಿಂಕ್ಡ್ಇನ್, ನೌಕರಿ ಮತ್ತು ಐಐಎಂ ಜಾಬ್ಸ್ ಮುಖಾಂತರ ಹಾಗೂ ಎಚ್ಆರ್ ಮ್ಯಾನೇಜರ್ಗಳಿಗೆ ನೇರವಾಗಿ ಇಮೇಲ್ ಮಾಡಿದರೂ ಒಂದೇ ಒಂದು ಕಾಲ್ ಬ್ಯಾಕ್ ಬಂದಿಲ್ಲ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ತಮ್ಮ ಈ ಕಥೆಯನ್ನು ರೆಡ್ಡಿಟ್ನಲ್ಲಿ ಹಂಚಿಕೊಂಡಿದ್ದು, ಪ್ರಸ್ತುತ ಉದ್ಯೋಗ ಮಾರುಕಟ್ಟೆಯಲ್ಲಿ ಅನುಭವಿ ಟೈರ್-1 ಎಂಬಿಎ ಪದವೀಧರರು ಸಹ ಇದೇ ರೀತಿಯ ಸಮಸ್ಯೆಯನ್ನು ಎದುರಿಸುತ್ತಿರುವುದು ಕಮೆಂಟ್ ಸೆಕ್ಷನ್ನಲ್ಲಿ ಚರ್ಚೆಯಾಗಿದೆ.