
ರಾಜ್ಯದಲ್ಲಿ ನಕಲಿ ಔಷಧಿ ದಂಧೆ ನಡೆಸುತ್ತಿದ್ದ ಪ್ರಕರಣದ ಪ್ರಮುಖ ಆರೋಪಿ ಪ್ರಶಾಂತ್ ಎಂಬಾತನನ್ನು ಅಜರ್‌ಬೈಜಾನ್‌ನಿಂದ ಹಿಂದಿರುಗಿದ ವೇಳೆ ಸೆಪ್ಟೆಂಬರ್ 28ರಂದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಫೈಜರ್ ಕಂಪನಿಯ ಒರಿಜಿನಲ್ ಲೇಬಲ್‌ಗಳನ್ನು ತರಲು ಪ್ರಶಾಂತ್ ವರ್ಷದಲ್ಲಿ ಹತ್ತಾರು ಬಾರಿ ಟರ್ಕಿ ಸೇರಿದಂತೆ ವಿವಿಧ ದೇಶಗಳಿಗೆ ಭೇಟಿ ನೀಡುತ್ತಿದ್ದ ವಿಚಾರ ಎಸ್ಐಟಿ ತನಿಖೆಯಿಂದ ಬಯಲಾಗಿದೆ.
ವೀರೇಶ್ ಜೈನ್ ಎಂಬ ಮತ್ತೊಬ್ಬ ಆರೋಪಿ ಆಸ್ಪತ್ರೆಗಳು ಮತ್ತು ಮೆಡಿಕಲ್‌ಗಳಿಗೆ ನಕಲಿ ಔಷಧಗಳನ್ನು ಪೂರೈಸುತ್ತಿದ್ದು, ಈ ಜಾಲದ ವಹಿವಾಟು ವಾರ್ಷಿಕ ಸುಮಾರು 15 ಕೋಟಿ ರೂ. ಇತ್ತು ಎಂದು ಅಧಿಕಾರಿಗಳು ಪತ್ತೆ ಮಾಡಿದ್ದಾರೆ.