
ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಅಗ್ರ 8ರೊಳಗೆ ಸ್ಥಾನ ಪಡೆಯಲು ವಿಫಲವಾದ ಕಾರಣ ವೆಸ್ಟ್ ಇಂಡೀಸ್ ತಂಡ 2027ರ ವಿಶ್ವಕಪ್‌ಗೆ ನೇರ ಅರ್ಹತೆ ಕಳೆದುಕೊಂಡಿದೆ.
ಸೆಪ್ಟೆಂಬರ್ 30, 2026ರ ಕಟ್-ಆಫ್ ದಿನಾಂಕದೊಳಗೆ ಅಗತ್ಯ ರೇಟಿಂಗ್ ಪಾಯಿಂಟ್ ಗಳಿಸಲು ಸಾಧ್ಯವಾಗದ ಕಾರಣ ವಿಂಡೀಸ್ ತಂಡ ಅಧಿಕೃತವಾಗಿ ರೇಸ್‌ನಿಂದ ಹೊರಬಿದ್ದಿದೆ.
ವಿಶ್ವಕಪ್ ಪ್ರವೇಶಕ್ಕಾಗಿ ವೆಸ್ಟ್ ಇಂಡೀಸ್ ತಂಡವು 2027ರ ಫೆಬ್ರವರಿ 22 ರಿಂದ ಮಾರ್ಚ್ 23 ರವರೆಗೆ ನಡೆಯಲಿರುವ 10 ತಂಡಗಳ ಗ್ಲೋಬಲ್ ಕ್ವಾಲಿಫೈಯರ್ ಟೂರ್ನಿಯಲ್ಲಿ ಆಡಬೇಕಿದೆ.