
ಬಿಗ್ ಬಾಸ್ ಕನ್ನಡ ಸೀಸನ್ 13ಕ್ಕೆ ಸಿದ್ಧತೆ ನಡೆಯುತ್ತಿದ್ದು, ಈ ಬಾರಿ ಸಾಮಾನ್ಯರಿಗೂ ಅವಕಾಶ ನೀಡಲು 'ಬಿಗ್ ಬಾಸ್ ಅಗ್ನಿಪರೀಕ್ಷೆ' ಎಂಬ ಆಯ್ಕೆ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ.
ಅಂತಿಮ ಹಂತಕ್ಕೆ ಆಯ್ಕೆಯಾದ 60 ಮಂದಿ ಸ್ಪರ್ಧಿಗಳಿಗೆ ನಟಿ ಶ್ರುತಿ, ಚಂದನ್ ಶೆಟ್ಟಿ, ವಿನಯ್ ಗೌಡ ಮತ್ತು ಸಂಗೀತ ಶೃಂಗೇರಿ ಅವರು ಕಠಿಣ ಟಾಸ್ಕ್ ನೀಡುತ್ತಿದ್ದಾರೆ.
ಜಡ್ಜ್‌ಗಳು ನೀಡುವ ಟಾಸ್ಕ್ ಮತ್ತು ಪ್ರಶ್ನೆಗಳ ಆಧಾರದ ಮೇಲೆ ಅಂತಿಮ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗುತ್ತಿದ್ದು, ಅಂತಿಮವಾಗಿ ಪ್ರೇಕ್ಷಕರ ನಿರ್ಧಾರದಂತೆ ಸ್ಪರ್ಧಿಗಳು ಮನೆ ಪ್ರವೇಶಿಸಲಿದ್ದಾರೆ.