
ನವದೆಹಲಿಯಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆಯ ಮೊದಲ ದಿನದ ಮುಕ್ತಾಯದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ನಾಯಕರಿಗೆ ಭವ್ಯ ಔತಣಕೂಟ ಏರ್ಪಡಿಸಿದ್ದರು.
ದೀರ್ಘ ವಿಮಾನ ಪ್ರಯಾಣ, ಜೆಟ್ಲ್ಯಾಗ್ ಹಾಗೂ ಸತತ ಸಭೆಗಳಿಂದ ದಣಿದಿದ್ದರಿಂದ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಮತ್ತು ಅಬುಧಾಬಿಯ ಯುವರಾಜ ಶೇಖ್ ಖಾಲಿದ್ ಬಿನ್ ಮೊಹಮ್ಮದ್ ಈ ಔತಣಕೂಟಕ್ಕೆ ಗೈರಾಗಿದ್ದರು.
ಭೋಜನಕೂಟಕ್ಕೆ ಗೈರಾಗುವ ಮುನ್ನ ಪ್ರಧಾನಿ ಮೋದಿ ಮತ್ತು ಷಿ ಜಿನ್ಪಿಂಗ್ ದ್ವಿಪಕ್ಷೀಯ ಮಾತುಕತೆ ಪೂರ್ಣಗೊಳಿಸಿದ್ದು, ಪರಸ್ಪರ ಗೌರವ, ಸೂಕ್ಷ್ಮತೆ ಹಾಗೂ ಹಿತಾಸಕ್ತಿಗಳ ಅಡಿಯೇ ಬಾಂಧವ್ಯ ರೂಪಿಸಲು ಒಪ್ಪಿಕೊಂಡರು.