
ಅಗ್ರಿ ಗೋಲ್ಡ್ ಕಂಪನಿಯಲ್ಲಿ ಹಣ ಕಳೆದುಕೊಂಡ ಹೂಡಿಕೆದಾರರಿಗೆ ಹಣ ಮರಳಿ ಸಿಗುವ ನಿರೀಕ್ಷೆ ಮೂಡಿದ್ದು, ಆಂಧ್ರಪ್ರದೇಶ ಸಿಐಡಿ ಅಧಿಕಾರಿಗಳ ಸೂಚನೆಯಂತೆ ರಾಜ್ಯದ ಹೂಡಿಕೆದಾರರು ಬಾಂಡ್‌ಗಳೊಂದಿಗೆ ಪೊಲೀಸ್ ಠಾಣೆಗಳ ಮುಂದೆ ಜಮಾಯಿಸುತ್ತಿದ್ದಾರೆ.
ಆಂಧ್ರ ಸಿಐಡಿ ತಂಡವು ಕರ್ನಾಟಕಕ್ಕೆ ಆಗಮಿಸಿ ಬೆಂಗಳೂರು ನಗರ, ಗ್ರಾಮಾಂತರ ಸೇರಿದಂತೆ ಒಟ್ಟು 8 ಜಿಲ್ಲೆಗಳಲ್ಲಿ ವಿಶೇಷ ಕಚೇರಿಗಳನ್ನು ತೆರೆದು ನೋಂದಣಿ ಮತ್ತು ಪರಿಶೀಲನೆ ಕಾರ್ಯ ನಡೆಸುತ್ತಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಸೇರಿದಂತೆ ವಿವಿಧೆಡೆ ಮುಂದಿನ 15 ದಿನಗಳ ಕಾಲ ಸಾರ್ವಜನಿಕರ ಹೂಡಿಕೆ ದಾಖಲೆಗಳನ್ನು ಪಡೆದು ಆಂಧ್ರ ಸಿಐಡಿ ಪೋರ್ಟಲ್‌ಗೆ ಅಪ್‌ಲೋಡ್ ಮಾಡುವ ಪ್ರಕ್ರಿಯೆ ನಡೆಯಲಿದೆ.