
ಸಲ್ಮಾನ್ ಖಾನ್ ಅವರ ವ್ಯಕ್ತಿತ್ವ ಹಕ್ಕು ಉಲ್ಲಂಘನೆಯಾಗಿದೆ ಎಂಬ ಕಾರಣಕ್ಕೆ ‘ಕಾಲಾ ಹಿರಣ್’ ಸಿನಿಮಾದ ಟೀಸರ್ ತೆಗೆದುಹಾಕಲು ದೆಹಲಿ ಹೈಕೋರ್ಟ್ ನೀಡಿದ್ದ ಆದೇಶವನ್ನು ನಿರ್ಮಾಪಕ ಅಮಿತ್ ಜಾನಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
ಸಲ್ಮಾನ್ ಖಾನ್ ಪರ ವಕೀಲರು, ತಮ್ಮ ಒಪ್ಪಿಗೆಯಿಲ್ಲದೆ ಕಾಲ್ಪನಿಕ ಪಾತ್ರ ಸೃಷ್ಟಿಸಿ ತಮ್ಮ ಸೂಪರ್‌ಹಿಟ್ ಸಿನಿಮಾಗಳ ಉಲ್ಲೇಖಗಳನ್ನು ಬಳಸಲಾಗಿದೆ ಎಂದು ಆರೋಪಿಸಿದ್ದರು.
ಸಾರ್ವಜನಿಕ ಘಟನೆಗಳನ್ನು ಆಧರಿಸಿ ಸಿನಿಮಾ ಮಾಡುವುದನ್ನು ತಡೆಯಲು ವ್ಯಕ್ತಿತ್ವ ಹಕ್ಕುಗಳನ್ನು ಅಸ್ತ್ರವಾಗಿ ಬಳಸಬಾರದು ಎಂದು ನಿರ್ಮಾಪಕರು ತಮ್ಮ ಮೇಲ್ಮನವಿಯಲ್ಲಿ ವಾದಿಸಿದ್ದಾರೆ.