
ಮನಸ್ತಾಪಗಳು ಉಂಟಾದಾಗ ಮೂರನೇ ವ್ಯಕ್ತಿಗಳ ಪ್ರವೇಶ ಹಾಗೂ ಬೆಂಬಲದ ಕುರಿತು ನಟ ಕಿಚ್ಚ ಸುದೀಪ್ ಹಿಂದೆ ನೀಡಿದ್ದ ಕಿವಿಮಾತಿನ ವಿಡಿಯೋ ವೈರಲ್ ಆಗಿದೆ.
ಹೊಡೆದಾಡಿಕೊಂಡವರು ಒಂದಾಗುತ್ತಾರೆ ಆದರೆ ಅವರಿಗೆ ಸಪೋರ್ಟ್ ಮಾಡಿದವರು ಮೂರ್ಖರಂತೆ ಕಾಣುತ್ತಾರೆ ಎಂದು ಸುದೀಪ್ ಆ ವಿಡಿಯೋದಲ್ಲಿ ಹೇಳಿದ್ದರು.
ಕಿಚ್ಚ ಸುದೀಪ್ ಪ್ರಸ್ತುತ 'ಬಿಗ್ ಬಾಸ್ ಕನ್ನಡ ಸೀಸನ್ 13' ರಿಯಾಲಿಟಿ ಶೋ ಅನ್ನು ಯಶಸ್ವಿಯಾಗಿ ನಿರೂಪಿಸುತ್ತಿದ್ದಾರೆ.