
ಮುಂಗಾರು ಮಳೆಯ ಕುರಿತು ತಾವು ನೀಡಿದ್ದ ಭವಿಷ್ಯದಂತೆ ಮಳೆ ಕೊರತೆಯಾಗಿ ಬರಗಾಲ ಸೃಷ್ಟಿಯಾಗಿದೆ ಎಂದು ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ತಿಳಿಸಿದ್ದಾರೆ.
ಈ ವರ್ಷದ ಹಿಂಗಾರು ಮಳೆ ನಿರೀಕ್ಷೆಯಂತೆ ಉತ್ತಮವಾಗಿ ಸುರಿಯಲಿದ್ದು, ಜಲಚರಗಳಿಗೆ ಒಳಿತಾಗುವುದರ ಜತೆಗೆ ಜನ ಹಾಗೂ ಜಾನುವಾರುಗಳಿಗೆ ಸಮೃದ್ಧಿ ಸಿಗಲಿದೆ ಎಂದು ಅವರು ಭವಿಷ್ಯ ನುಡಿದ್ದಾರೆ.
ಮೈಸೂರಿನಲ್ಲಿ ನಡೆಯುವಂತೆ ಉತ್ತರ ಕರ್ನಾಟಕದಲ್ಲೂ ದಸರಾ ಜಂಬೂ ಸವಾರಿ ಆಯೋಜಿಸುತ್ತಿರುವುದು ಏಕತಾ ಮನೋಭಾವದ ಪ್ರತೀಕ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.