
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಅರ್ನಾಬ್ ಚಂಡಮಾರುತವಾಗಿ ಬದಲಾಗಿ ಅಕ್ಟೋಬರ್ 28ರಂದು ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಲ್ಯಾಂಡ್ಫಾಲ್ ಸಮಯದಲ್ಲಿ ಪ್ರತಿ ಗಂಟೆಗೆ 115 ರಿಂದ 125 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ಮುನ್ನೆಚ್ಚರಿಕೆಯಾಗಿ ಒಡಿಶಾದ 5 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ದಕ್ಷಿಣ ಭಾರತದ ಕರಾವಳಿ ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ತಮಿಳುನಾಡು ಹಾಗೂ ಪುದುಚ್ಚೇರಿಯ 9 ಬಂದರುಗಳಲ್ಲಿ ಚಂಡಮಾರುತ ಮುನ್ಸೂಚನಾ ಸಿಗ್ನಲ್ಗಳನ್ನು ಹಾರಿಸಲಾಗಿದೆ.