
ಬೆಂಗಳೂರಿನ ಬ್ರಿಟಿಷ್ ಲೈಫ್‌ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಮೇಲೆ ಎಫ್‌ಎಸ್‌ಎಸ್‌ಎಐ ದಾಳಿ ನಡೆಸಿ, ನಿಯಮ ಉಲ್ಲಂಘಿಸಿ ತಯಾರಿಸಿದ್ದ 3.7 ಮೆಟ್ರಿಕ್ ಟನ್ ಶಿಶು ಆಹಾರವನ್ನು ವಶಪಡಿಸಿಕೊಂಡಿದೆ.
ತಪಾಸಣೆಯಲ್ಲಿ ಮಿಸ್‌ಬ್ರ್ಯಾಂಡೆಡ್ ಹಾಗೂ ಅವಧಿ ಮುಗಿದಿದ್ದ ಉತ್ಪನ್ನಗಳು ಪತ್ತೆಯಾಗಿದ್ದು, ಶಿಶುಗಳ ಆರೋಗ್ಯದ ದೃಷ್ಟಿಯಿಂದ ಅಧಿಕಾರಿಗಳು ಈ ಆಹಾರ ಪದಾರ್ಥಗಳನ್ನು ಸಂಪೂರ್ಣವಾಗಿ ನಾಶಪಡಿಸಿದ್ದಾರೆ.
ವೈದ್ಯರ ಸಲಹೆ ಇಲ್ಲದೆ ಇಂತಹ ಕಳಪೆ ಫಾರ್ಮುಲಾ ಆಹಾರ ನೀಡಿದರೆ ಶಿಶುಗಳಿಗೆ ವಾಂತಿ, ಭೇದಿ ಮತ್ತು ಬೆಳವಣಿಗೆಯಲ್ಲಿ ತೀವ್ರ ತೊಂದರೆ ಉಂಟಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.