
ಬಿಗ್ ಬಾಸ್ ಕನ್ನಡ ವೀಕೆಂಡ್ ಪಂಚಾಯ್ತಿ ಶನಿವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಕೆಲ ಸ್ಪರ್ಧಿಗಳ ಮೇಲೆ ಗರಂ ಆಗಿ ಎಚ್ಚರಿಕೆ ನೀಡಿದ್ದರು.
ಭಾನುವಾರದ ಸಂಚಿಕೆಯಲ್ಲಿ ಸುದೀಪ್ ಅವರು ಸ್ಪರ್ಧಿಗಳಿಗೆ ವಿವಿಧ ಆಟಗಳನ್ನು ಆಡಿಸಿದ್ದು, ಆಟದಲ್ಲಿ ಸೋತವರು ಉಪ್ಪು ಹಾಕಿದ ಕೇಕ್ ತಿನ್ನಬೇಕಾಯಿತು.
ಅದರಂತೆ ಶಾಸ್ತ್ರಿ ಅವರು ಉಪ್ಪಿನ ಕೇಕ್ ತಿನ್ನುವಂತಾಗಿದ್ದು, ಆ ವೇಳೆ ಅವರು ನೀಡಿದ ಹಾವಭಾವವನ್ನು ನೋಡಿ ಸುದೀಪ್ ‘ಅದ್ಭುತ ನಟನೆ’ ಎಂದು ಶ್ಲಾಘಿಸಿದರು.