
ಲಡಾಖ್ನಲ್ಲಿರುವ 28 ವ್ಯೂಹಾತ್ಮಕ ಸ್ಥಳಗಳಿಗೆ ಪ್ರಮಾಣೀಕೃತ ಹೆಸರುಗಳನ್ನಿಟ್ಟ ಭಾರತದ ಗೃಹ ಸಚಿವಾಲಯದ ನಿರ್ಧಾರಕ್ಕೆ ಚೀನಾ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಲಡಾಖ್ ಭಾರತದ ಅವಿಭಾಜ್ಯ ಅಂಗವಾಗಿದ್ದು, ಚೀನಾ ಎಷ್ಟೇ ನಿರಾಕರಿಸಿದರೂ ಈ ಸತ್ಯವನ್ನು ಬದಲಾಯಿಸಲು ಆಗುವುದಿಲ್ಲ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿರುಗೇಟು ನೀಡಿದೆ.
ಅಧಿಕೃತ ನಕ್ಷೆ ವ್ಯವಸ್ಥೆ ಸುವ್ಯವಸ್ಥೆಗೊಳಿಸಲು ಮತ್ತು ಭದ್ರತಾ ದೃಷ್ಟಿಯಿಂದ ಅಕ್ಟೋಬರ್ 2ರಂದು ಗೋಗ್ರಾ ಹಾಗೂ ಹಾಟ್ ಸ್ಪ್ರಿಂಗ್ ಸೇರಿದಂತೆ 28 ಸ್ಥಳಗಳನ್ನು ಮಾನ್ಯ ಮಾಡಲಾಗಿದೆ.