ಇರಾನ್ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ, ಲೆಬನಾನ್ನ ಹೆಜ್ಬೊಲ್ಲಾ ಹೋರಾಟಗಾರರಿಗೆ ಬೆಂಬಲ ಸೂಚಿಸಿ ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಜಿಹಾದ್ ನಡೆಸುವಂತೆ ಕರೆ ನೀಡಿದ್ದಾರೆ.
56 ವರ್ಷದ ಮೊಜ್ತಬಾ ಖಮೇನಿ, ಇಸ್ರೇಲ್ನ ಮಿಲಿಟರಿ ಕಾರ್ಯಾಚರಣೆ ಸಂಪೂರ್ಣ ನಿಲ್ಲುವವರೆಗೆ ಅಮೆರಿಕದೊಂದಿಗಿನ ಯಾವುದೇ ಒಪ್ಪಂದಕ್ಕೆ ಇರಾನ್ ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹೆಜ್ಬೊಲ್ಲಾ ಮಾಜಿ ಪ್ರಧಾನ ಕಾರ್ಯದರ್ಶಿ ಸಯ್ಯದ್ ಹಸನ್ ನಸ್ರಲ್ಲಾ ಅವರ ತ್ಯಾಗವನ್ನು ಸ್ಮರಿಸಿರುವ ಖಮೇನಿ, ಇರಾನ್ ಮತ್ತು ಹೆಜ್ಬೊಲ್ಲಾ ಮೈತ್ರಿಯನ್ನು ಪ್ರಾದೇಶಿಕ ರಾಜಕಾರಣದ ಪ್ರಮುಖ ಶಕ್ತಿ ಎಂದು ಬಣ್ಣಿಸಿದ್ದಾರೆ.