
ಕರ್ನಾಟಕ ಸರ್ಕಾರವು ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಶುಲ್ಕವನ್ನು ಶೇ.5ರಿಂದ ಶೇ.2ಕ್ಕೆ ಇಳಿಕೆ ಮಾಡಿದ್ದು, ಈ ರಿಯಾಯಿತಿ ಅಕ್ಟೋಬರ್ 23ರವರೆಗೆ ಮಾತ್ರ ಲಭ್ಯವಿರುತ್ತದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಏಕ ನಿವೇಶನ ಅನುಮೋದನೆಯಡಿ ಹೊಸದಾಗಿ ಎ ಖಾತಾ ಪಡೆಯುವವರಿಗೂ ಈ ಶುಲ್ಕ ವಿನಾಯಿತಿ ಅನ್ವಯವಾಗಲಿದೆ ಎಂದು ನಗರಾಭಿವೃದ್ಧಿ ಇಲಾಖೆ ತಿಳಿಸಿದೆ.
ಈಗಾಗಲೇ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಆಸ್ತಿದಾರರಿಗೂ ಈ ರಿಯಾಯಿತಿ ಸಿಗಲಿದ್ದು, ಆನ್‌ಲೈನ್‌ನಲ್ಲಿ ಪರಿಷ್ಕೃತ ಡಿಮಾಂಡ್ ನೋಟಿಸ್ ನೀಡಲು ಸೂಚಿಸಲಾಗಿದೆ.