
ಉತ್ತರ ಪ್ರದೇಶದ ವೃಂದಾವನದಲ್ಲಿ ಪ್ರಸಿದ್ಧ ಆಧ್ಯಾತ್ಮಿಕ ಗುರು ಸಂತ ಪ್ರೇಮಾನಂದ ಮಹಾರಾಜ್ ಶಿಷ್ಯ ದೀಪಕ್ ಲೋಧಿ ಅಲಿಯಾಸ್ ರಸಿಕ್ ದುಲಾರಿ ಶರಣ್ ಅವರ ಸಾವು ಅನುಮಾನಗಳನ್ನು ಹುಟ್ಟುಹಾಕಿದೆ.
ಶುಕ್ರವಾರ ಬೆಳಿಗ್ಗೆ ಆಶ್ರಮದ 4ನೇ ಮಹಡಿಯಿಂದ ಜಿಗಿದು ಮೃತಪಟ್ಟಿದ್ದ ಶರಣ್ ಅವರ ಕೊಠಡಿಯಲ್ಲಿ ರಕ್ತಸಿಕ್ತ ಗ್ರೈಂಡರ್ ಯಂತ್ರ ಪತ್ತೆಯಾಗಿದ್ದು, ಅವರ ಗುಪ್ತಾಂಗ ಕಟ್ ಆಗಿರುವುದು ದೃಢಪಟ್ಟಿದೆ.
ಪೊಲೀಸರು ಶರಣ್ ಅವರ ಮೊಬೈಲ್ ಫೋನ್ನಲ್ಲಿ ಡಿಲೀಟ್ ಆಗಿರುವ ವಾಟ್ಸಾಪ್ ಚಾಟ್ಗಳು, ವಿಡಿಯೋಗಳು ಮತ್ತು ಇತರ ಡೇಟಾವನ್ನು ಮರುಪಡೆಯಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ತನಿಖೆ ತೀವ್ರಗೊಳಿಸಿದ್ದಾರೆ.