
ಪಂಜಾಬ್ ಸರ್ಕಾರದ ತೀರ್ಥಯಾತ್ರೆ ಯೋಜನೆಯಡಿ ಅಮೃತಸರಕ್ಕೆ ತೆರಳಿದ್ದ ಲುಧಿಯಾನದ ಚಮನ್ ಲಾಲ್ (ನೆನಪಿನ ಶಕ್ತಿ ಕಡಿಮೆ ಇರುವ ವೃದ್ಧ) ಗುಂಪಿನಿಂದ ಬೇರ್ಪಟ್ಟು ರೈಲು ಹತ್ತಿ ಬಿಹಾರದ ಗಯಾ ತಲುಪಿದ್ದರು.
ಗಯಾದಲ್ಲಿ ಹಸಿವಿನಿಂದ ಅಲೆದಾಡುತ್ತಿದ್ದ ವೃದ್ಧನಿಗೆ ಊಟ ನೀಡಿ ತನ್ನ ಮನೆಯಲ್ಲಿ ಆಶ್ರಯ ನೀಡಿದ್ದ ನಿರಜ್ ಎಂಬುವವರು, ವೃದ್ಧರ ಹೆಸರು ಮತ್ತು ಚಾಟ್ಜಿಪಿಟಿ ಸಹಾಯದಿಂದ ಅವರ ಪಂಜಾಬ್ನ ವಿಳಾಸ ಪತ್ತೆ ಹಚ್ಚಿದ್ದಾರೆ.
ನಿರಜ್ ಅವರು ವೃದ್ಧನನ್ನು ಸ್ವತಃ 1,200 ಕಿ.ಮೀ ದೂರದ ಅವರ ಮನೆಗೆ ಸುರಕ್ಷಿತವಾಗಿ ಕರೆತಂದು ಕುಟುಂಬಸ್ಥರಿಗೆ ಒಪ್ಪಿಸಿದ್ದು, ಈ ಮಾನವೀಯ ಕಾರ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆಗೆ ಪಾತ್ರವಾಗಿದೆ.