Health & Environment
ಬೆಳಗಾವಿ ಮೀಸಲು ಅರಣ್ಯ ಒತ್ತುವರಿ: ಯೋಗ ಕೇಂದ್ರಗಳ ವಿರುದ್ಧ ಕ್ರಮಕ್ಕೆ ಕೇಂದ್ರ ಆದೇಶ

ಬೆಳಗಾವಿ ಮೀಸಲು ಅರಣ್ಯ ಒತ್ತುವರಿ: ಯೋಗ ಕೇಂದ್ರಗಳ ವಿರುದ್ಧ ಕ್ರಮಕ್ಕೆ ಕೇಂದ್ರ ಆದೇಶ

prajavani2h
THE BRIEF
1

ಬೆಳಗಾವಿ ಜಿಲ್ಲೆಯ ರಾಮದುರ್ಗದ ಐದು ಎಕರೆ ಮೀಸಲು ಅರಣ್ಯದಲ್ಲಿ ನಿಯಮಬಾಹಿರವಾಗಿ ಯೋಗ, ಧ್ಯಾನ ಮತ್ತು ಶಿಕ್ಷಣ ಕೇಂದ್ರ ನಿರ್ಮಿಸಿದ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಪರಿಸರ ಸಚಿವಾಲಯ ಆದೇಶಿಸಿದೆ.

2

ಅಕ್ರಮ ಕಾಮಗಾರಿಗಾಗಿ ರಾಮದುರ್ಗದ ಶಿವ ಪ್ರತಿಷ್ಠಾಪನಾ ಸೇವಾ ಸಮಿತಿಯ ವಿರುದ್ಧ ಅರಣ್ಯ ಇಲಾಖೆ 2017ರಲ್ಲೇ ಎಫ್‌ಐಆರ್‌ ದಾಖಲಿಸಿದ್ದು, ಈ ಯೋಜನೆಯ ಪ್ರಸ್ತಾವವನ್ನು ಕೇಂದ್ರವು 2018ರ ಜೂನ್‌ನಲ್ಲಿ ತಿರಸ್ಕರಿಸಿತ್ತು.

3

ಪ್ರದೀಪ್‌ ಎಂ. ಪಟ್ಟಣ ಅಧ್ಯಕ್ಷರಾಗಿರುವ ಶಾರದಾ ದೇವಿ ಎಜುಕೇಷನಲ್ ಸೊಸೈಟಿಯು ಈ ಜಾಗದಲ್ಲಿ 72 ಅಡಿ ಎತ್ತರದ ಶಿವನ ಪ್ರತಿಮೆ ಹಾಗೂ 22 ಅಡಿ ಎತ್ತರದ ನಂದಿಯ ಪ್ರತಿಮೆಯನ್ನು ನಿರ್ಮಿಸಿದೆ.