
ನಟ ನಾನಿ ಹಾಗೂ ನಿರ್ದೇಶಕ ಶ್ರೀಕಾಂತ್ ಒಡೆಲ ಕಾಂಬಿನೇಷನ್ನಲ್ಲಿ ಮೂಡಿಬಂದ ‘ಪ್ಯಾರಡೈಸ್’ ಸಿನಿಮಾ ಸೆಪ್ಟೆಂಬರ್ 24ರಂದು ಥಿಯೇಟರ್ಗಳಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ವಿಫಲವಾಗಿತ್ತು.
80ರ ದಶಕದ ಕೊಳೆಗೇರಿ ಹಿನ್ನೆಲೆಯ ಸವಾರೀ ಸಮುದಾಯದ ಕಥೆ ಹೊಂದಿರುವ ಈ ಚಿತ್ರದಲ್ಲಿ ನಾನಿ ಜಡಲ್ ಎಂಬ ರಗಡ್ ಪಾತ್ರದಲ್ಲಿ ನಟಿಸಿದ್ದು, ಮೋಹನ್ ಬಾಬು ಮತ್ತು ರಾಘವ್ ಜುಯಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಥಿಯೇಟರ್ನಲ್ಲಿ ಸೋತಿರುವ ಈ ಚಿತ್ರವು ಅಕ್ಟೋಬರ್ 22ರಿಂದ ನೆಟ್ಫ್ಲಿಕ್ಸ್ ಒಟಿಟಿ ವೇದಿಕೆಯಲ್ಲಿ ‘ವೆಲ್ಕಮ್ ಟು ಜಡಲ್ ಜಮಾನಾ’ ಶೀರ್ಷಿಕೆಯೊಂದಿಗೆ ಸ್ಟ್ರೀಮಿಂಗ್ ಆರಂಭಿಸಲಿದೆ.