
ಆಗಸ್ಟ್ 14ರಂದು ಆಲಮಟ್ಟಿ ಜಲಾಶಯದ ನೀರಿನ ಮಟ್ಟ 519.45 ಮೀಟರ್ ತಲುಪಿದ್ದು, ಬಸವಸಾಗರ ಜಲಾಶಯವು 492.23 ಮೀಟರ್ ಮಟ್ಟದೊಂದಿಗೆ ಭರ್ತಿಯಾಗುವ ಹಂತದಲ್ಲಿದೆ.
ಕಬಿನಿ ಜಲಾಶಯದಲ್ಲಿ 18.30 ಟಿಎಂಸಿ, ಹೇಮಾವತಿ ಜಲಾಶಯದಲ್ಲಿ 31.884 ಟಿಎಂಸಿ ಮತ್ತು ಕೆಆರ್ಎಸ್ ಜಲಾಶಯದಲ್ಲಿ 31.521 ಟಿಎಂಸಿ ನೀರು ಸಂಗ್ರಹವಾಗಿದೆ.
ಶಿವಮೊಗ್ಗದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1793.60 ಅಡಿಗಳಷ್ಟಿದ್ದು, ಜಲಾಶಯಕ್ಕೆ 13,079 ಕ್ಯೂಸೆಕ್ ಒಳಹರಿವು ದಾಖಲಾಗಿದೆ.