
ಮುಂಬೈನ ಬಾಂದ್ರಾದಲ್ಲಿ 'ಬೆಣ್ಣೆ' ಎಂಬ ಕೆಫೆ ಆರಂಭಿಸಿದ ದಂಪತಿ ಅಖಿಲ್ ಅಯ್ಯರ್ ಮತ್ತು ಶ್ರಿಯಾ ನಾರಾಯಣ್, ಪ್ರತಿದಿನ 800ಕ್ಕೂ ಹೆಚ್ಚು ದೋಸೆಗಳನ್ನು ಮಾರಾಟ ಮಾಡುತ್ತಿದ್ದಾರೆ.
ಉದ್ಯೋಗಕ್ಕೆ ರಾಜೀನಾಮೆ ನೀಡಿ ಆರಂಭಿಸಿದ ಈ ಸಣ್ಣ ಕೆಫೆ, ಅಪ್ಪಟ ದಾವಣಗೆರೆ ಶೈಲಿಯ ರುಚಿಯಿಂದಾಗಿ ತಿಂಗಳಿಗೆ 1 ಕೋಟಿ ರೂಪಾಯಿ ಆದಾಯ ಗಳಿಸುತ್ತಿದೆ.
ಈ ಕೆಫೆಗೆ ಇತ್ತೀಚೆಗೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಭೇಟಿ ನೀಡಿ ದೋಸೆಯನ್ನು ಸವಿದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.