
ಕೇರಳದ 20 ವರ್ಷದ ವಿದ್ಯಾರ್ಥಿನಿ ಅಶ್ವತಿ, ತನ್ನ ಕಾಲೇಜು ಶುಲ್ಕ ಮತ್ತು ಅನಾರೋಗ್ಯ ಪೀಡಿತ ತಾಯಿಯ ಚಿಕಿತ್ಸೆಗಾಗಿ ಕಳೆದ ನಾಲ್ಕು ವರ್ಷಗಳಿಂದ ಪ್ರತಿದಿನ 60 ಮನೆಗಳಿಗೆ ಪತ್ರಿಕೆ ಹಂಚುತ್ತಿದ್ದಾರೆ.
ದಿನಗೂಲಿ ನೌಕರರಾದ ತಂದೆಯ ಮೇಲೆ ಹೊರೆಯಾಗಬಾರದೆಂದು ಅಶ್ವತಿ ಸ್ವತಃ ದುಡಿಯುತ್ತಿದ್ದು, ಬೆಳಗಿನ ಜಾವವೇ ಸೈಕಲ್ನಲ್ಲಿ ಪತ್ರಿಕೆ ವಿತರಣೆ ಮಾಡಿ ನಂತರ ಕಾಲೇಜಿಗೆ ಹೋಗುತ್ತಾರೆ.
ಅಶ್ವತಿಯ ಈ ಕಠಿಣ ಪರಿಶ್ರಮ ಮತ್ತು ಮಾನಸಿಕ ಸ್ಥೈರ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.