
ನಟ ಗೋವಿಂದ ಅವರು ನಟಿ ಕೋಮಲ್ ರಾಣಿ ಜೊತೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಬೆನ್ನಲ್ಲೇ, ಪತ್ನಿ ಸುನೀತಾ ಅಹುಜಾ ಅವರು ಪತಿಯ ವಿರುದ್ಧ ಸಾರ್ವಜನಿಕವಾಗಿ ಆಕ್ರೋಶ ಹೊರಹಾಕಿದ್ದಾರೆ.
ಕೋಮಲ್ ರಾಣಿಯನ್ನು ಉದ್ದೇಶಿಸಿ ಮಾತನಾಡಿದ ಸುನೀತಾ, ಅವರು ಸರಿಯಾದ ಬಟ್ಟೆ ಧರಿಸುವುದನ್ನು ಕಲಿಯಬೇಕು ಎಂದು ವ್ಯಂಗ್ಯವಾಡಿದ್ದಾರೆ.
ಗೋವಿಂದ ಅವರ ಬುದ್ಧಿ ಭ್ರಷ್ಟವಾಗಿದೆ ಎಂದು ಆರೋಪಿಸಿರುವ ಸುನೀತಾ, ಈ ವಿವಾದದ ಕುರಿತು ತಮಗೆ ಯಾವುದೇ ಆಸಕ್ತಿಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.