
ಪೋಲೆಂಡ್ ಮತ್ತು ಉಕ್ರೇನ್ ಗಡಿಭಾಗದ ರೈಲ್ವೆ ಕ್ರಾಸಿಂಗ್ ಬಳಿ ರಷ್ಯಾ ನಡೆಸಿದ ಭೀಕರ ಡ್ರೋನ್ ದಾಳಿಯಿಂದ ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಪ್ರಯಾಣಿಸುತ್ತಿದ್ದ ರೈಲು ಕೂದಲೆಳೆಯಿಂದ ಪಾರಾಗಿದೆ.
ಯಾಹೋದಿನ್-ಡೊರೊಹಸ್ಕ್ ಗಡಿ ಪ್ರದೇಶದಲ್ಲಿ ನಡೆದ ಈ ದಾಳಿಯಲ್ಲಿ ಜಾನ್ಸನ್ ಅವರ ರೈಲಿನ ಹತ್ತಿರದಲ್ಲಿದ್ದ ಮತ್ತೊಂದು ರೈಲಿನ ಎಂಜಿನ್ಗೆ ಡ್ರೋನ್ ಅಪ್ಪಳಿಸಿ ಪೆಟ್ರೋಲ್ ಬಂಕ್ ಮತ್ತು ಟ್ರಕ್ಗಳು ಸುಟ್ಟುಹೋಗಿವೆ.
ದಾಳಿಯ ಮುನ್ಸೂಚನೆ ಸಿಕ್ಕ ತಕ್ಷಣ ಸಿಬ್ಬಂದಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಉಕ್ರೇನ್ ರೈಲ್ವೆ ತಿಳಿಸಿದೆ.