
ರಾಜ್ಯದಲ್ಲಿ ಮಳೆಯ ಆರ್ಭಟ ಕಡಿಮೆಯಾಗಿರುವ ಕಾರಣ ಪ್ರಮುಖ ಜಲಾಶಯಗಳಿಗೆ ಒಳಹರಿವಿನ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದೆ.
ಕೆಆರ್ಎಸ್ ಜಲಾಶಯದ ಗರಿಷ್ಠ ಮಟ್ಟ 124.80 ಅಡಿಗಳಿದ್ದು, ಸೋಮವಾರದ ನೀರಿನ ಮಟ್ಟ 101.60 ಅಡಿಯಷ್ಟಿದ್ದು 560 ಕ್ಯೂಸೆಕ್ ಒಳಹರಿವು ದಾಖಲಾಗಿದೆ.
ತುಂಗಭದ್ರಾ ಡ್ಯಾಂನಲ್ಲಿ ಒಳಹರಿವು ಸಂಪೂರ್ಣ ನಿಂತುಹೋಗಿದ್ದು (00 ಕ್ಯೂಸೆಕ್), 9,791 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.