
ಒಡಿಶಾದ ಪಾರಾದೀಪ್ ಕರಾವಳಿಯಿಂದ 240 ನಾಟಿಕಲ್ ಮೈಲಿ ದೂರದಲ್ಲಿ 24 ಸಿಬ್ಬಂದಿಯಿದ್ದ ಪನಾಮಾ ಧ್ವಜದ 'ಎಮ್ವಿ ಓಷನ್ ವಿನ್ನರ್' ಸರಕು ಹಡಗು ಬಂಗಾಳ ಕೊಲ್ಲಿಯಲ್ಲಿ ಮುಳುಗಡೆಯಾಗಿದೆ.
ಭಾರತೀಯ ಕರಾವಳಿ ಪಡೆ ಮತ್ತು ನೌಕಾಪಡೆ ಜಂಟಿ ಕಾರ್ಯಾಚರಣೆ ನಡೆಸಿ ಇಬ್ಬರು ನಾವಿಕರನ್ನು ರಕ್ಷಿಸಿದ್ದು, ನಾಪತ್ತೆಯಾದ 22 ಮಂದಿಗಾಗಿ ಹುಡುಕಾಟವನ್ನು ತೀವ್ರಗೊಳಿಸಿವೆ.
ಮುಳುಗಿದ ಹಡಗಿನಲ್ಲಿದ್ದ ಸಿಬ್ಬಂದಿಯಲ್ಲಿ 20 ಚೀನಾ, 3 ಮ್ಯಾನ್ಮಾರ್ ಮತ್ತು ಓರ್ವ ಬಾಂಗ್ಲಾದೇಶದ ಪ್ರಜೆಗಳಿದ್ದು, ಹಡಗು ಕಬ್ಬಿಣದ ಅದಿರನ್ನು ಹೊತ್ತು ಸಿಂಗಾಪುರದತ್ತ ಪ್ರಯಾಣಿಸುತ್ತಿತ್ತು.