
ರಸ್ತೆ ಅಪಘಾತದಲ್ಲಿ ಗಾಯಗೊಂಡು ಬೆಂಗಳೂರು ಆಸ್ಪತ್ರೆಯಲ್ಲಿ ಮಿದುಳು ನಿಷ್ಕ್ರಿಯಗೊಂಡಿದ್ದ ಕೆಜಿಎಫ್ನ ಶ್ವೇತಾ (28) ಅವರ ಪೋಷಕರು ಮಗಳ ಸಾವಿನಲ್ಲೂ ಅಂಗಾಂಗ ದಾನ ಮಾಡಲು ಮುಂದೆ ಬಂದಿದ್ದಾರೆ.
ಕುಟುಂಬದವರ ಈ ನಿರ್ಧಾರದಿಂದ ಶ್ವೇತಾರ ಯಕೃತ್ತು (ಲಿವರ್) ಹಾಗೂ ಹೃದಯದ ಕವಾಟುಗಳನ್ನು ದಾನ ಮಾಡಲಾಗಿದ್ದು, ಇಬ್ಬರು ರೋಗಿಗಳಿಗೆ ಮರುಜೀವ ಸಿಕ್ಕಿದೆ.
ಪೋಷಕರ ಈ ಮಾನವೀಯ ಕಾರ್ಯವನ್ನು ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಮುಕ್ತಕಂಠದಿಂದ ಪ್ರಶಂಸಿಸಿದ್ದು, ರಾಜ್ಯದಲ್ಲಿ 6,291 ಮಂದಿ ಅಂಗಾಂಗ ಕಸಿಗಾಗಿ ಕಾಯುತ್ತಿದ್ದಾರೆ.