Health & Environment
ಒಡಿಶಾದಲ್ಲಿ ಅಪರೂಪದ ಸಯಾಮಿ ಅವಳಿ ಮಗುವಿನ ಜನನ

ಒಡಿಶಾದಲ್ಲಿ ಅಪರೂಪದ ಸಯಾಮಿ ಅವಳಿ ಮಗುವಿನ ಜನನ

prajavani57m
THE BRIEF
1

ಒಡಿಶಾದ ಬ್ರಹ್ಮಪುರದ ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಕಂಧಮಲ್ ಜಿಲ್ಲೆಯ 22 ವರ್ಷದ ಮಹಿಳೆಯೊಬ್ಬರು ಅಪರೂಪದ ಸಯಾಮಿ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ.

2

ಈ ಮಕ್ಕಳು ಎರಡು ತಲೆಗಳು, ಎರಡು ಕುತ್ತಿಗೆ, ಒಂದು ಸೊಂಟ, ಎರಡು ಬೆನ್ನುಹುರಿ, ಒಂದೇ ಹೃದಯ, ಯಕೃತ್ತು ಹಾಗೂ ಒಂದೇ ದೇಹವನ್ನು ಹೊಂದಿದ್ದು, ಹುಟ್ಟಿದಾಗ 2.25 ಕೆ.ಜಿ ತೂಕವಿದ್ದವು.

3

ವೈದ್ಯಕೀಯವಾಗಿ 'ಡೈಸೆಫಾಲಿಕ್ ಪ್ಯಾರಾಪಾಗಸ್' ಎನ್ನಲಪಡುವ ಈ ಸ್ಥಿತಿಯು ಪ್ರತಿ 3 ಲಕ್ಷ ಮಕ್ಕಳಲ್ಲಿ ಒಂದರಲ್ಲಿ ಮಾತ್ರ ಕಂಡುಬರುತ್ತಿದ್ದು, ಮಕ್ಕಳ ಆರೋಗ್ಯ ಸ್ಥಿತಿ ಗಂಭೀರವಾಗಿದೆ.