
‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋಗೆ ವೈಲ್ಡ್ ಕಾರ್ಡ್ ಮೂಲಕ ಮೂವರು ಹೊಸ ಸ್ಪರ್ಧಿಗಳು ಕಾಲಿಟ್ಟಿದ್ದು, ಅವರಿಗೆ ಕಿಚ್ಚ ಸುದೀಪ್ ಸ್ವಾಗತ ಕೋರಿದ್ದಾರೆ.
ಭಾನುವಾರದ ಸಂಚಿಕೆಯ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದ್ದು, ಸಂಜೆ ಪ್ರಸಾರವಾಗಲಿರುವ ಸಂಚಿಕೆಯಲ್ಲಿ ಹೊಸ ಸ್ಪರ್ಧಿಗಳು ಯಾರೆಂಬುದು ಬಹಿರಂಗಗೊಳ್ಳಲಿದೆ.
ಈ ಹೊಸ ಸ್ಪರ್ಧಿಗಳ ಅನಿರೀಕ್ಷಿತ ಎಂಟ್ರಿಯಿಂದ ಮನೆಯೊಳಗಿನ ಸ್ಪರ್ಧಿಗಳಿಗೆ ಅಚ್ಚರಿಯಾಗಿದ್ದು, ಶೋಗೆ ಹೊಸ ಹುರುಪು ಸಿಕ್ಕಂತಾಗಿದೆ.