
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು (ICC) ಪರಿಷ್ಕೃತ ಕ್ರಿಕೆಟ್ ನಿಯಮಗಳನ್ನು ಜಾರಿಗೆ ತಂದಿದ್ದು, ಇವು ಅಕ್ಟೋಬರ್ 1ರಿಂದ ಆರಂಭವಾಗುವ ಸರಣಿಗಳಿಗೆ ಅನ್ವಯವಾಗಲಿವೆ.
ಪುರುಷರ ಕ್ರಿಕೆಟ್ನಲ್ಲಿ ಬ್ಯಾಟರ್ಗಳು ಸಮಯ ವ್ಯರ್ಥ ಮಾಡುವುದನ್ನು ತಡೆಯಲು ಕಠಿಣ ನಿಯಮ ತರಲಾಗಿದ್ದು, ನಿಗದಿತ ಸಮಯದೊಳಗೆ ಸಿದ್ಧರಾಗದಿದ್ದರೆ ಫೀಲ್ಡಿಂಗ್ ತಂಡಕ್ಕೆ 5 ಪೆನಾಲ್ಟಿ ರನ್ಗಳನ್ನು ನೀಡಲಾಗುತ್ತದೆ.
ಟೆಸ್ಟ್ ಪಂದ್ಯಗಳಲ್ಲಿ ಹಗಲು ವೇಳೆಯ ನಿಯಮಿತ ಪಂದ್ಯಗಳಲ್ಲಿ ಪಿಂಕ್ ಬಾಲ್ ಬಳಸಲು ಪ್ರಾಯೋಗಿಕ ಅನುಮತಿ ನೀಡಲಾಗಿದ್ದು, ರನ್-ಔಟ್ ಹಾಗೂ ವೈಡ್ ಬಾಲ್ ನಿಯಮಗಳಲ್ಲೂ ಬದಲಾವಣೆ ಮಾಡಲಾಗಿದೆ.